8th pay commission 8ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಏರಿಕೆ ಬಗ್ಗೆ ಮಹತ್ವದ ಮಾಹಿತಿ
ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ 8ನೇ ವೇತನ ಆಯೋಗ (8th Pay Commission) ಸಂಬಂಧಿಸಿದ ಸುವರ್ಣಸುದ್ದಿ ಹೊರಬಿದ್ದಿದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ಈ ಆಯೋಗದ ಸಮಿತಿಯನ್ನು ರಚಿಸಲು ಮುಂದಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಅಧಿಕೃತ ಅಧಿಸೂಚನೆಯೂ ಪ್ರಕಟವಾಗುವ ಸಾಧ್ಯತೆ ಇದೆ.
2026ರಿಂದ ಸಂಬಳ ಪರಿಷ್ಕರಣೆ
ಮೂಲಗಳ ಪ್ರಕಾರ, 8ನೇ ವೇತನ ಆಯೋಗ ಸಮಿತಿ ತನ್ನ ಅಂತಿಮ ವರದಿಯನ್ನು 2026ರ ಮಧ್ಯಭಾಗದಲ್ಲಿ ಸರ್ಕಾರಕ್ಕೆ ಸಲ್ಲಿಸಲಿದ್ದು, ಆ ವರದಿಯ ಆಧಾರದ ಮೇಲೆ ನೌಕರರ ಸಂಬಳ ಪರಿಷ್ಕರಣೆ ನಡೆಯಲಿದೆ.
ಆದರೆ, ಶಿಫಾರಸುಗಳನ್ನು ಅಂಗೀಕರಿಸಿದರೂ, ಬದಲಾವಣೆಯು 2026ರ ಜನವರಿಯಿಂದಲೇ ಅನ್ವಯವಾಗಲಿದೆ. ನೌಕರರಿಗೆ ಬಾಕಿ ಸಂಬಳ (Arrears) ರೂಪದಲ್ಲಿ ಹಣ ಪಾವತಿಯಾಗುವ ಸಾಧ್ಯತೆ ಇದೆ.
ಪ್ರತಿ 10 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ
ಪ್ರತಿ ದಶಕಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಸರ್ಕಾರದ ರೂಢಿ. 2006ರಲ್ಲಿ 6ನೇ ವೇತನ ಆಯೋಗ, 2016ರಲ್ಲಿ 7ನೇ ವೇತನ ಆಯೋಗ ಜಾರಿಯಲ್ಲಿತ್ತು. ಈಗ 2026ಕ್ಕೆ 8ನೇ ವೇತನ ಆಯೋಗ ಜಾರಿಗೆ ಬರುವ ನಿರೀಕ್ಷೆಯಿದೆ.
ಸಮಿತಿಯಲ್ಲಿ ಅರ್ಥಶಾಸ್ತ್ರಜ್ಞರು, ಆಡಳಿತಾಧಿಕಾರಿಗಳು ಮತ್ತು ಇತರ ತಜ್ಞರು ಸ್ಥಾನ ಪಡೆದು, ನೌಕರರ ಕೆಲಸದ ಪ್ರಮಾಣ, ಖರ್ಚಿನ ಮಟ್ಟ ಮತ್ತು ಜೀವನೋಪಾಯ ವೆಚ್ಚಗಳ ಆಧಾರದ ಮೇಲೆ ಶಿಫಾರಸುಗಳನ್ನು ನೀಡುತ್ತಾರೆ.
ಭರ್ಜರಿ ಸಂಬಳ ಏರಿಕೆ
ಫಿಟ್ಮೆಂಟ್ ಅಂಶ (Fitment Factor):
7ನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ಅಂಶ 2.57 ಆಗಿತ್ತು. ಉದಾಹರಣೆಗೆ, ಹಳೆಯ ವೇತನ ₹10,000 ಇದ್ದರೆ, ನೂತನ ವೇತನ ₹25,700 ಆಗಿತ್ತು.
8ನೇ ವೇತನ ಆಯೋಗದಲ್ಲಿ ಈ ಅಂಶ 1.92 ರಿಂದ 2.86ರ ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ಹಳೆಯ ವೇತನ ₹20,000 ಇದ್ದರೆ, ಹೊಸ ವೇತನ ಸುಮಾರು ₹57,200 ಆಗಬಹುದು.
ಪಿಂಚಣಿದಾರರಿಗೆ ಕೂಡ ಲಾಭ
ವೇತನ ಪರಿಷ್ಕರಣೆಯೊಂದಿಗೆ ಪಿಂಚಣಿದಾರರ ಪಿಂಚಣಿಯಲ್ಲೂ ಪರಿಷ್ಕರಣೆ ಸಾಧ್ಯ. ಗ್ರಾಚುಯಿಟಿ, ಲೀವ್ ಎನ್ಕ್ಯಾಶ್ಮೆಂಟ್ ಮತ್ತು ಇತರ ಸೇವಾ ಉಳಿತಾಯಗಳ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರಗಳ ಬದಲಾವಣೆ
ಹೆಚ್ಚುವರಿ ವೆಚ್ಚದ ಭಾರವನ್ನು ತಾಳಬೇಕಾದ ರಾಜ್ಯ ಸರ್ಕಾರಗಳು ಆಯೋಗದ ಶಿಫಾರಸುಗಳನ್ನು ಪಾಲಿಸಲು ಬದ್ಧರಾಗಿವೆ. ಆದರೆ, ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿ ಕೆಲವು ರಾಜ್ಯಗಳು ತಕ್ಷಣ ಜಾರಿಗೆ ತರುತ್ತವೆ, ಇನ್ನು ಕೆಲವು ವಿಳಂಬವಾಗಿ ಜಾರಿಗೆ ತರುತ್ತವೆ.
ಸರ್ಕಾರಿ ನೌಕರರಲ್ಲಿ ಹರ್ಷ
8ನೇ ವೇತನ ಆಯೋಗದ ಬಗ್ಗೆ ಬೆಳವಣಿಗೆಗಳನ್ನು ಗಮನಿಸುತ್ತಿರುವ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಸಮಿತಿಯನ್ನು ಶೀಘ್ರ ರಚಿಸಿ, ಮಾಹಿತಿ ಬಹಿರಂಗಪಡಿಸಲು ಆಗ್ರಹ ವ್ಯಕ್ತವಾಗಿದೆ.

