ರಾಜ್ಯ ಸರ್ಕಾರದಿಂದ ರೈತರಿಗೆ ಕೊಳವೆ ಬಾವಿ(Borewell) ಕೊರೆಸಲು ಅನುಮತಿ –
ಕರ್ನಾಟಕ ಸರ್ಕಾರವು ಕೃಷಿ ಮತ್ತು ನೀರಾವರಿ ಅಭಿವೃದ್ಧಿಗಾಗಿ ರೈತರಿಗೆ ಸಹಾಯ ಮಾಡಲು ಮಹತ್ವದ ಹೆಜ್ಜೆ ಇಟ್ಟಿದ್ದು, 4,923 ಕೊಳವೆ ಬಾವಿಗಳನ್ನು ಕೊರೆಸಲು ಅನುಮೋದನೆ ನೀಡಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ ಈ ಅನುಮತಿ ದೊರೆತಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶೇಷ ಯೋಜನೆಯಡಿ ಅನುಮೋದನೆ
- 2024-25ನೇ ಸಾಲಿನ ವಿಶೇಷ ಘಟಕ ಯೋಜನೆ (SCSP) ಅಡಿ 3,095 ಕೊಳವೆ ಬಾವಿಗಳು
- ಬುಡಕಟ್ಟು ಉಪ ಯೋಜನೆ (TSP) ಅಡಿ 1,828 ಕೊಳವೆ ಬಾವಿಗಳು
- ಒಟ್ಟು 4,923 ಕೊಳವೆ ಬಾವಿಗಳ ಅನುಮೋದನೆ
ನೀರಾವರಿ ಅಭಿವೃದ್ಧಿಗೆ ಸರ್ಕಾರದ ಸಹಾಯ
ನೀರಾವರಿ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ರಾಜ್ಯದ ರೈತರು ಬೇಸಿಗೆ ಸಮಯದಲ್ಲಿ ನೀರಿನ ಕೊರತೆಯಿಂದ ಬಳಲಬಾರದೆಂಬುದು ಸರ್ಕಾರದ ಉದ್ದೇಶ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮ ರೈತಸಹಾಯ ಗುಂಪುಗಳಲ್ಲಿ ಹಂಚಿಕೊಳ್ಳಿ.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಅನುಮೋದನೆ
- ರಾಜ್ಯ ಸರ್ಕಾರವು ರೈತರ ನೀರಾವರಿ ಸಮಸ್ಯೆ ಪರಿಹರಿಸಲು ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ.
- ಈ ಯೋಜನೆ ಹೆಚ್ಚಿನ ಪ್ರಯೋಜನ ಪಡೆಯುವ ನಿಗಮಗಳು:
ನಿಗಮ ಹೆಸರು | ಉದ್ದೇಶ |
---|---|
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ | ಪರಿಶಿಷ್ಟ ಜಾತಿ ರೈತರಿಗಾಗಿ |
ಮಹರ್ಷಿ ವಾಲ್ಮೀಕಿ ಆದಿವಾಸಿ ಅಭಿವೃದ್ಧಿ ನಿಗಮ | ಪರಿಶಿಷ್ಟ ಪಂಗಡದ ರೈತರಿಗಾಗಿ |
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ | ಹಿಂದುಳಿದ ವರ್ಗದ ರೈತರಿಗಾಗಿ |
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | ಲಿಂಗಾಯತ ಸಮುದಾಯದ ರೈತರಿಗಾಗಿ |
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ | ಒಕ್ಕಲಿಗ ಸಮುದಾಯದ ರೈತರಿಗಾಗಿ |
ಕರ್ನಾಟಕ ಉಪ್ಪರ ಅಭಿವೃದ್ಧಿ ನಿಗಮ | ಉಪ್ಪರ ಸಮುದಾಯದ ರೈತರಿಗಾಗಿ |
ವಿಶ್ವಕರ್ಮಾ ಅಭಿವೃದ್ಧಿ ನಿಗಮ | ವಿಶ್ವಕರ್ಮ ಸಮುದಾಯದ ರೈತರಿಗಾಗಿ |
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ | ಅಲ್ಪಸಂಖ್ಯಾತ ರೈತರಿಗಾಗಿ |
ಅರ್ಜಿ ಸಲ್ಲಿಸಲು ಸೂಕ್ತ ಸಮಯ
- ಪ್ರತಿ ವರ್ಷ ಸೆಪ್ಟೆಂಬರ್-ನವೆಂಬರ್ ತಿಂಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ.
ಸಬ್ಸಿಡಿ ವಿವರಗಳು
ಯೋಜನೆ | ಬೆಲೆ (ರೂಪಾಯಿ) | ವಿದ್ಯುದ್ದೀಕರಣ ವೆಚ್ಚ (ರೂಪಾಯಿ) |
---|---|---|
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು | 4.75 ಲಕ್ಷ | 75,000 |
ಇತರ ಎಲ್ಲಾ ಜಿಲ್ಲೆಗಳು | 3.75 ಲಕ್ಷ | 75,000 |
ಘಟಕ ಪೂರ್ಣಗೊಳ್ಳದಿದ್ದರೆ | 50,000 (ಶೇ.4 ಬಡ್ಡಿದರದಲ್ಲಿ ಸಾಲ) | – |
ಅಗತ್ಯ ದಾಖಲೆಗಳು
✔ ಆಧಾರ್ ಕಾರ್ಡ್ (ಜೆರಾಕ್ಸ್)
✔ ಬ್ಯಾಂಕ್ ಪಾಸ್ ಬುಕ್ (ಜೆರಾಕ್ಸ್)
✔ ಪೋಟೋ
✔ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
✔ ಜಮೀನಿನ ಪಹಣಿ/RTC
✔ ರೇಶನ್ ಕಾರ್ಡ್ (ಜೆರಾಕ್ಸ್)
✔ ಹಿಡುವಳಿ ಪ್ರಮಾಣ ಪತ್ರ
✔ ಪ್ರಸ್ತುತ ಜಮೀನಿನಲ್ಲಿ ಕೊಳವೆ ಬಾವಿ ಇಲ್ಲದಿರುವ ಕುರಿತು ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ
- ಅರ್ಹ ರೈತರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಗ್ರಾಮ ಒನ್/ಬೆಂಗಳೂರು ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಹಾಯ ಕೇಂದ್ರವನ್ನು ಸಂಪರ್ಕಿಸಿ.