Salary hike ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ತುಟ್ಟಿಭತ್ಯೆ ಶೇ.1.50ರಷ್ಟು ಹೆಚ್ಚಳ
ರಾಜ್ಯ ಸರಕಾರದಿಂದ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ದೊರೆತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ನೌಕರರ ತುಟ್ಟಿಭತ್ಯೆ(Salary Hike) ಶೇ.1.50ರಷ್ಟು ಹೆಚ್ಚಳ ಮಾಡುವ ಮಹತ್ವದ ಆದೇಶವನ್ನು ಮಂಗಳವಾರ ಜಾರಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮಾಹಿತಿ ನೀಡಿದ್ದು, ಹೊಸ ಭತ್ಯೆ ಜನುವರಿ 1, 2025 ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಈಗಿನ ಶೇ.10.75ರ ತುಟ್ಟಿಭತ್ಯೆ ಶೇ.12.25ಕ್ಕೆ ಹೆಚ್ಚಿಸಲಾಗಿದ್ದು, ಇದು ನೌಕರರ ಆರ್ಥಿಕ ಸೌಲಭ್ಯ ಹೆಚ್ಚಿಸಲು ನೆರವಾಗಲಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೌಕರರ ಪರವಾಗಿ ಷಡಕ್ಷರಿ ಧನ್ಯವಾದ ಸಲ್ಲಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಉಪ ನಿರ್ದೇಶಕರ ನೇಮಕ ಅನಿವಾರ್ಯ: ಸಿಎಂ ತಾಕೀತು
ವಿಧಾನಸೌಧದಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪರಿಶೀಲನಾ ಸಭೆಯಲ್ಲಿ ಸಿಎಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಧಿಕಾರಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅವುಗಳ ಉದ್ದೇಶವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದರು.

ಸಿಎಂ ನೀಡಿದ ಮುಖ್ಯ ಸೂಚನೆಗಳು:
- ಉಪ ನಿರ್ದೇಶಕರ ನೇಮಕಾತಿ: ಪ್ರತಿಯೊಂದು ಜಿಲ್ಲೆಯಲ್ಲಿ ಖಚಿತವಾಗಿ ಉಪ ನಿರ್ದೇಶಕರಿರಬೇಕು.
- ಪ್ರಾಧಿಕಾರದ ಸಭೆ: ಪ್ರತೀ ವರ್ಷ ಸಭೆ ನಡೆಯಬೇಕು; ಆಡಿಟ್ ಪ್ರಕ್ರಿಯೆ ಮತ್ತು ನೇಮಕಾತಿ ಕಡ್ಡಾಯ.
- ತರಬೇತುದಾರರ ನೇಮಕಾತಿ: 176 ಮಂದಿಗೆ ನೇಮಕಾತಿಗೆ ಒಪ್ಪಿಗೆ ಇದ್ದರೂ ಪ್ರಕ್ರಿಯೆ ವಿಳಂಬವಾಗಿದೆ – ಅಧಿಕಾರಿಗಳಿಗೆ ಎಚ್ಚರಿಕೆ.
- ಕ್ರೀಡಾಕೂಟಗಳ ನಿಯಂತ್ರಣ: ರಾಷ್ಟ್ರೀಯ/ಅಂತಾರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸುವ ಸಂಸ್ಥೆಗಳಿಗೆ ಕಠಿಣ ಮಾರ್ಗಸೂಚಿ ರೂಪಿಸಲಾಗಬೇಕು. ಕನಿಷ್ಠ 15 ರಾಷ್ಟ್ರಗಳ ಭಾಗವಹಿಸುವಿಕೆಯಿಂದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಬೇಕು.
- ಆಹಾರ ಗುಣಮಟ್ಟ: ಕ್ರೀಡಾ ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆಗಾಗಿ ಸರ್ಪ್ರೈಸ್ ವಿಸಿಟ್ ನಡೆಸುವ ಸೂಚನೆ.
- ಕಂಠೀರವ ಕ್ರೀಡಾಂಗಣ: ಗ್ಯಾಲರಿಗಳ ಸುರಕ್ಷತೆ ಪರಿಶೀಲನೆ, ಶೌಚಾಲಯ, ಟ್ರಾಕ್, ಜಿಮ್ ದುರಸ್ತಿ ಹಾಗೂ ಎಸಿಗೆ ವ್ಯವಸ್ಥೆ ಜಾರಿಗೊಳಿಸುವ ಕುರಿತು ಕ್ರಮ.

