Aadhar ಆಧಾರ್ ಕ್ಯೂಆರ್ ಕೋಡ್: ಶೀಘ್ರದಲ್ಲೇ ಡಿಜಿಟಲ್ ದೃಢೀಕರಣಕ್ಕೆ ಹೊಸ ಆಯಾಮ.!
ಕೆಂದ್ರೀಯ ಸರ್ಕಾರವು ಆಧಾರ್(Aadhar) ಕಾರ್ಡ್‌ನಲ್ಲಿ ಹೊಸ ಡಿಜಿಟಲ್ ಕ್ಯೂಆರ್ ಕೋಡ್ ತಂತ್ರಜ್ಞಾನವನ್ನು ಪರಿಚಯಿಸಲು ಸಜ್ಜಾಗಿದೆ. ಇದರಿಂದ ಬ್ಯಾಂಕ್, ವಿಮಾನ ನಿಲ್ದಾಣ, ಸರ್ಕಾರಿ ಕಚೇರಿಗಳು ಮೊದಲಾದವುಗಳಲ್ಲಿ ಆಧಾರ್ ಕಾರ್ಡ್ ಪರಿಶೀಲನೆಯು ಇನ್ನೂ ಸುಲಭ, ವೇಗ ಹಾಗೂ ಸುರಕ್ಷಿತವಾಗಲಿದೆ.
ಏನು ಈ ಹೊಸ ವ್ಯವಸ್ಥೆಯ ಮಹತ್ವ?
ಹಣ ಪಾವತಿ ಮಾಡುವಾಗ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ, ಈಗ ಆಧಾರ್ ದೃಢೀಕರಣಕ್ಕೂ ಅದೆ ರೀತಿಯ ತಂತ್ರಜ್ಞಾನವನ್ನು ಬಳಕೆ ಮಾಡಬಹುದಾಗಲಿದೆ. ಈ ಡಿಜಿಟಲ್ ಕೋಡ್‌ನ್ನು ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಅಥವಾ ಸ್ಕ್ಯಾನರ್ ಮೂಲಕ ತಕ್ಷಣ ಓದಿ, ವ್ಯಕ್ತಿಯ ಮಾಹಿತಿ ಪರಿಶೀಲನೆ ನಡೆಸಬಹುದು.
ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು:
- ಕ್ಷಿಪ್ರ ಮಾಹಿತಿ ಪರಿಶೀಲನೆ – ಬಯೋಮೆಟ್ರಿಕ್ ಅಥವಾ OTP ನಿರೀಕ್ಷೆಯ ಅವಶ್ಯಕತೆ ಇಲ್ಲದೆ ತಕ್ಷಣದ ದೃಢೀಕರಣ ಸಾಧ್ಯ.
- ನಕಲಿ ಆಧಾರ್ ತಡೆ – ಮೂಲ ದಾಖಲೆಗಳ ಖಚಿತತೆ ತಕ್ಷಣ ತಿಳಿದುಬರುವುದರಿಂದ ವಂಚನೆಗಳನ್ನು ತಡೆಗಟ್ಟಬಹುದು.
- ಆಫ್‌ಲೈನ್ ದೃಢೀಕರಣ – ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಪರಿಶೀಲನೆ ಸಾಧ್ಯ.
- ಮಾಹಿತಿಗೆ ಹೆಚ್ಚುವರಿ ಸುರಕ್ಷತೆ – ಸೈಬರ್ ದಾಳಿಗಳನ್ನು ತಪ್ಪಿಸಲು ಈ ತಂತ್ರಜ್ಞಾನ ಗಟ್ಟಿದೆಯಾದ ಸುರಕ್ಷತೆ ನೀಡುತ್ತದೆ.
- ವೈವಿಧ್ಯಮಯ ಬಳಕೆ – ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ತಕ್ಷಣ ಲಭ್ಯವಾಗುತ್ತದೆ, ಹೋಟೆಲ್‌ನಲ್ಲಿ ಗುರುತಿನ ದೃಢೀಕರಣ ಸುಲಭವಾಗುತ್ತದೆ.
ಕೇಂದ್ರದಿಂದ ಅಧಿಕೃತ ಮಾಹಿತಿ
ಸಂಚಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹೊಸ ವೈಶಿಷ್ಟ್ಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಇದರ ಉಪಯೋಗ ಮತ್ತು ತಂತ್ರಜ್ಞಾನ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ವಿವರಿಸಿದ್ದಾರೆ.
ಉದಾಹರಣೆಗಾಗಿ:
ನಾವು ಅಂಗಡಿಯೊಂದರಲ್ಲಿ ಖರೀದಿ ಮಾಡುತ್ತಿರುವಾಗ ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ, ಭವಿಷ್ಯದಲ್ಲಿ ಆಧಾರ್ ದೃಢೀಕರಣಕ್ಕೂ ಆ ರೀತಿಯಲೇ ಸ್ಕ್ಯಾನಿಂಗ್ ಸಾಧ್ಯವಾಗಲಿದೆ. ಮೊಬೈಲ್ ಮೂಲಕ ತಕ್ಷಣದ ದೃಢೀಕರಣ, ಸಮಯ ಉಳಿತಾಯ ಮತ್ತು ಸುರಕ್ಷತೆ—all in one!