ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಅರ್ಜಿ ಸಲ್ಲಿಸಲು ಅವಕಾಶ
ಭಾರತ ಸರ್ಕಾರದ ಅಗ್ನಿಪಥ ಯೋಜನೆಯಡಿ ಅಗ್ನಿವೀರರು ಎಂಬ ಹೆಸರಿನಲ್ಲಿ ಭಾರತೀಯ ಸೇನೆಗೆ ಹೊಸ ಯುವ ಶಕ್ತಿ ಸೇರಿಸಲು ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಬಾರಿ ನೇಮಕಾತಿಯನ್ನು Agnipath Air Force Intake – 2025 ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿಗೆ ಸಂಬಂಧಿಸಿದ ಮುಖ್ಯ ಮಾಹಿತಿ:
ವಿಭಾಗ | ವಿವರಗಳು |
---|---|
ಯೋಜನೆಯ ಹೆಸರು | ಅಗ್ನಿಪಥ ಯೋಜನೆ – ಅಗ್ನಿವೀರ ಏರೋರ್ಸ್ ನೇಮಕಾತಿ 2025 |
ನೇಮಕಾತಿ ಸಂಸ್ಥೆ | ಭಾರತೀಯ ವಾಯುಪಡೆ (Indian Air Force) |
ಹುದ್ದೆಯ ಹೆಸರು | ಅಗ್ನಿವೀರ ವಾಯು (Agniveer Vayu) |
ಅರ್ಜಿ ವಿಧಾನ | ಆನ್‌ಲೈನ್ (Online) |
ಅಂತಿಮ ದಿನಾಂಕ | ಜುಲೈ 31, 2025 |
ವಯೋಮಿತಿ | ಕನಿಷ್ಟ: 17.5 ವರ್ಷ, ಗರಿಷ್ಟ: 21 ವರ್ಷ |
ಜನನ ದಿನಾಂಕ ಮಿತಿ | 02-07-2005 ರಿಂದ 02-01-2009 ನಡುವೆ ಹುಟ್ಟಿರುವವರೇ ಅರ್ಹರು |
ಪರೀಕ್ಷೆ ವಿಧಾನ | ಲಿಖಿತ ಪರೀಕ್ಷೆ + ದೈಹಿಕ ತಪಾಸಣೆ |
ಅಧಿಕೃತ ವೆಬ್‌ಸೈಟ್ | agnipathvayu.cdac.in |
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆಗಳನ್ನು ಹೊಂದಿರಬೇಕು:
ವಿಜ್ಞಾನ ವಿಭಾಗ:
- 10+2 / ಪಿಯುಸಿ / ಸಮಾನ ಅರ್ಹತೆ.
- ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಕನಿಷ್ಟ 50% ಅಂಕ.
- ಅಥವಾ ಮೂರಾರು ವರ್ಷಗಳ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದವರು (ಕನಿಷ್ಟ 50% + ಇಂಗ್ಲೀಷ್ ನಲ್ಲಿ 50%).
ಇತರ ವಿಭಾಗ:
- ಯಾವುದೇ ವಿಷಯದಲ್ಲಿ 10+2 ಅಥವಾ ಸಮಾನ ವಿದ್ಯಾರ್ಹತೆ.
- ಇಂಗ್ಲೀಷ್ ವಿಷಯದಲ್ಲಿ ಕನಿಷ್ಟ 50% ಅಂಕ ಅವಶ್ಯಕ.
ಅಗತ್ಯ ದಾಖಲೆಗಳು:
ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಬೇಕು:
- ಎಸ್.ಎಸ್.ಎಲ್.ಸಿ ಅಂಕಪಟ್ಟಿ
- ಪಿಯುಸಿ/ಡಿಪ್ಲೋಮಾ ಪ್ರಮಾಣ ಪತ್ರ
- ಜಾತಿ ಪ್ರಮಾಣಪತ್ರ (SC/ST/OBC/EWS – ಇಂಗ್ಲೀಷ್‌ನಲ್ಲಿ ಮಾತ್ರ)
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಬಿಳಿ ಹಿನ್ನೆಲೆಯ ಪೋಟೋ
- ಅಭ್ಯರ್ಥಿಯ ಸಹಿ
- ಪೋಟೋಗೆ ಅಡಿಯಲ್ಲಿ ಹೆಸರು ಮತ್ತು ಫೋಟೋ ತೆಗೆದ ದಿನಾಂಕ
ಆಯ್ಕೆ ಪ್ರಕ್ರಿಯೆ ಹಂತಗಳು:
- ಲಿಖಿತ ಪರೀಕ್ಷೆ (Online)
- ದೈಹಿಕ ಸಾಮರ್ಥ್ಯ ಪರೀಕ್ಷೆ (PFT)
- ವೈದ್ಯಕೀಯ ತಪಾಸಣೆ
- ದಾಖಲೆ ಪರಿಶೀಲನೆ
ಅಗ್ನಿವೀರ ಯೋಜನೆಯ ವಿಶೇಷತೆಗಳು:
- ಸೇವಾವಧಿ: 4 ವರ್ಷ
- ಪ್ರತಿ ವರ್ಷದ ವೇತನ: ಮೊದಲ ವರ್ಷದಲ್ಲಿ ₹30,000 (ಹೆಚ್ಚು ಹೊಣೆಗಾರಿಕೆ ಮತ್ತು ಅನುಭವದ ಜೊತೆಗೆ ಪ್ರತಿ ವರ್ಷ ವೇತನ ಹೆಚ್ಚಾಗುತ್ತದೆ)
- ಅಗ್ನಿವೀರ ಸೇವಾ ನಿಧಿ: ಸೇವಾವಧಿ ಅಂತ್ಯದಲ್ಲಿ ಸುಮಾರು ₹11 ಲಕ್ಷ ಸೇವಾ ನಿಧಿ (Tax Free)
ಅರ್ಜಿ ಸಲ್ಲಿಕೆ ಬಗ್ಗೆ ಸೂಚನೆ:
- ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ “Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಎಲ್ಲಾ ಮಾಹಿತಿ ಸರಿಯಾಗಿ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವಿಲ್ಲ.
- ಅರ್ಜಿ ಸಲ್ಲಿಸಿ ಕನ್‌ಫರ್ಮೇಶನ್ ಪಡೆದುಕೊಳ್ಳಿ.
ಸರ್ಕಾರದ ಉದ್ದೇಶ ಮತ್ತು ಮಹತ್ವ:
ಈ ಯೋಜನೆಯ ಮೂಲಕ ಭಾರತ ಸರ್ಕಾರ ಉತ್ಸಾಹಿ, ಶಿಸ್ತಿನತ್ಮಕ ಮತ್ತು ತಂತ್ರಜ್ಞಾನದ ಅರಿವು ಹೊಂದಿರುವ ಯುವಕರನ್ನು ರಕ್ಷಣಾ ವಲಯಕ್ಕೆ ತರಲು ಉದ್ದೇಶಿಸಿದೆ. ಇದು ಯುವಕರಿಗೆ ಅತ್ಯುತ್ತಮ ತರಬೇತಿ, ತಂತ್ರಜ್ಞಾನ ಕಲಿಕೆ ಹಾಗೂ ನೈತಿಕ ಮೌಲ್ಯಗಳ ಜೊತೆ ಸೇವಾವಕಾಶ ಕಲ್ಪಿಸುತ್ತದೆ.
ಯುವಕರಿಗೆ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಅಗ್ನಿಪಥ ಯೋಜನೆ, ಭಾರತೀಯ ಸೇನೆಯ ಬಲವರ್ಧನೆಗೆ ಹೊಸದಾಗಿ ರೂಪುಗೊಂಡಿರುವ ದಾರಿಯಾಗಿದೆ. ಅರ್ಹರು ಸಮಯಮಿತಿಯಲ್ಲಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿ.