Monday, March 2, 2026
spot_img
HomeNewsAgriculture: ಉಚಿತ ತೋಟಗಾರಿಕೆ ತರಬೇತಿ ಜೊತೆಗೆ ₹17,500 ಶಿಷ್ಯ ವೇತನ

Agriculture: ಉಚಿತ ತೋಟಗಾರಿಕೆ ತರಬೇತಿ ಜೊತೆಗೆ ₹17,500 ಶಿಷ್ಯ ವೇತನ

10 ತಿಂಗಳ ಉಚಿತ ತೋಟಗಾರಿಕೆ(Agriculture) ತರಬೇತಿ — ಅರ್ಜಿ ಆಹ್ವಾನ.!

ಕರ್ನಾಟಕ ತೋಟಗಾರಿಕೆ ಇಲಾಖೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಆಸಕ್ತ ಯುವಕರಿಗೆ 2025-26ನೇ ಸಾಲಿನಲ್ಲಿ 10 ತಿಂಗಳ ಉಚಿತ ತೋಟಗಾರಿಕೆ(Agriculture) ತರಬೇತಿಗೆ ಅವಕಾಶ ನೀಡುತ್ತಿದೆ. ಈ ತರಬೇತಿ ಹೊಸೂರು ಕ್ಷೇತ್ರದ ಸಿದ್ದಾಪುರದಲ್ಲಿರುವ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.

ತರಬೇತಿ ವಿಶೇಷತೆಗಳು:

  • ✅ 10 ತಿಂಗಳ ಉಚಿತ ತರಬೇತಿ
  • ✅ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ
  • ✅ ಪ್ರತಿ ತಿಂಗಳು ₹1,750 ಶಿಷ್ಯವೇತನ (DBT ಮೂಲಕ ನೇರ ಬ್ಯಾಂಕ್ ಖಾತೆಗೆ)
  • ✅ ನುರಿತ ತಜ್ಞರಿಂದ ಪ್ರಾಯೋಗಿಕ ತರಬೇತಿ
  • ✅ ಶೈಕ್ಷಣಿಕ ಕರ್ನಾಟಕ ಪ್ರವಾಸ (5 ದಿನ)
  • ✅ ವಿವಿಧ ತೋಟಗಾರಿಕೆ ಕೇಂದ್ರಗಳಲ್ಲಿ ಪೂರಕ ತರಬೇತಿ

ತರಬೇತಿ ಪಡೆಯುವ ಮೂಲಕ ಸಿಗುವ ಅವಕಾಶಗಳು:

  1. ಸರಕಾರಿ ಉದ್ಯೋಗ – “ಗಾರ್ಡನರ್” ಹುದ್ದೆಗೆ ನೇರ ನೇಮಕಾತಿಗೆ ಅರ್ಹತೆ.
  2. ಸ್ವತಂತ್ರ ಉದ್ಯಮ – ಖಾಸಗಿ ನರ್ಸರಿ ಸ್ಥಾಪನೆ, ಗೂಟಿ, ಕಸಿ, ಕಟ್‌ಟಿಂಗ್‌ ತಂತ್ರಗಳನ್ನು ಉಪಯೋಗಿಸಿ ಕೃಷಿ ಅಭಿವೃದ್ಧಿ.
  3. ಗುತ್ತಿಗೆ ಆಧಾರದ ಕೆಲಸ – ತೋಟಗಾರಿಕೆ ಕ್ಷೇತ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಅವಕಾಶ.
  4. ಖಾಸಗಿ ಉದ್ಯೋಗ – ಎಸ್ಟೇಟ್‌ಗಳಲ್ಲಿ ಅಥವಾ ನರ್ಸರಿಗಳಲ್ಲಿ ಮೇಲ್ವಿಚಾರಕರಾಗಿ ಕೆಲಸ.

ಅರ್ಹತಾ ಮಾನದಂಡಗಳು:

  • ಅಭ್ಯರ್ಥಿಗಳು ಕೃಷಿಕ ಕುಟುಂಬದವರಾಗಿರಬೇಕು.
  • ಕನಿಷ್ಠ SSLC ಉತ್ತೀರ್ಣರಾಗಿರಬೇಕು.
  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ವಯೋಮಿತಿಯು 18ರಿಂದ 30 ವರ್ಷವರೆಗೆ.
    • ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ: 33 ವರ್ಷ
    • ಮಾಜಿ ಸೈನಿಕರಿಗೆ: 33 ರಿಂದ 65 ವರ್ಷವರೆಗೆ ರಿಯಾಯಿತಿ

ಅರ್ಜಿಯ ಮಾಹಿತಿ:

  • ಅರ್ಜಿಯ ಅಂತಿಮ ದಿನಾಂಕ: ಶೀಘ್ರವೇ ಪ್ರಕಟವಾಗಲಿದೆ
  • ಅರ್ಜಿಸುವ ವಿಧಾನ: ಹತ್ತಿರದ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ಹೊಸೂರು ತರಬೇತಿ ಕೇಂದ್ರ, ಸಿದ್ದಾಪುರ ಸಂಪರ್ಕಿಸಿ.
  • ಸಂಪರ್ಕ ಸಂಖ್ಯೆ: 9611227478 / 8971956318
  • ಹೆಚ್ಚಿನ ಮಾಹಿತಿಗೆ: ತೋಟಗಾರಿಕೆ ಇಲಾಖೆ ಅಧಿಕೃತ ವೆಬ್‌ಸೈಟ್

ಸಲಹೆ:

ಈ ತರಬೇತಿಯನ್ನು 24 ವರ್ಷ ಮೇಲ್ಪಟ್ಟ ಅಥವಾ ಮುಂದಿನ ಶಿಕ್ಷಣಕ್ಕೆ ಅವಕಾಶವಿಲ್ಲದ ಅಭ್ಯರ್ಥಿಗಳು ಆರಿಸಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸದಲ್ಲಿರುವವರು ತಮ್ಮ ಓದಿನತ್ತ ಗಮನ ಹರಿಸುವುದು ಉತ್ತಮ.

WhatsApp Group Join Now
Telegram Group Join Now

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments