Arjun: ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ ಎಂಗೇಜ್ – 13 ವರ್ಷಗಳ ಪ್ರೇಮಕ್ಕೆ ಇಂದು ತೆರೆ.!
ಬಹುಭಾಷಾ ನಟ ಅರ್ಜುನ್ ಸರ್ಜಾ(Arjun) ಅವರ ಕಿರಿಯ ಪುತ್ರಿ ಅಂಜನಾ ಸರ್ಜಾ ತಮ್ಮ 13 ವರ್ಷಗಳ ಪ್ರೇಯಸಿಯ ಪ್ರೀತಿಗೆ ಮುದ್ರೆ ಬರೆದು, ಎಂಗೇಜ್ ಆಗಿದ್ದಾರೆ. ವಿದೇಶಿ ಪ್ರಿಯತಮನೊಂದಿಗೆ ಅವರು ಇಟಲಿಯಲ್ಲಿ ಅತ್ಯಂತ ರೊಮ್ಯಾಂಟಿಕ್ ಶೈಲಿಯಲ್ಲಿ ಎಂಗೇಜ್‌ಮೆಂಟ್ ಆಚರಿಸಿದ್ದು, ಇದನ್ನು ಕುಟುಂಬಸ್ಥರೂ ಹರ್ಷದಿಂದ ಸ್ವೀಕರಿಸಿದ್ದಾರೆ.
ಪ್ರೀತಿಯ ಪ್ರಸ್ತಾವಕ್ಕೆ “ಯೆಸ್” ಎಂದ ಅಂಜನಾ
ಅಂಜನಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ಗಳ ಮೂಲಕ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದು, “ಅವನ ಪ್ರೇಮ ಪ್ರಸ್ತಾಪಕ್ಕೆ ‘ಯೆಸ್’ ಎನ್ನದೇ ಉಳಿಯಲು ಸಾಧ್ಯವಿರಲಿಲ್ಲ” ಎಂಬ ಶಬ್ದಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗ್ ಅರ್ಜುನ್ ಸರ್ಜಾ ಪ್ರತಿಕ್ರಿಯಿಸುತ್ತಾ, “ನಾನು ಮೊದಲೇ ಊಹಿಸಿದ್ದೆ, ಅವನೇ ನಿನ್ನ ಪಾರ್ಟ್ನರ್ ಆಗ್ತಾನೆ” ಎಂದು ಕಾಮೆಂಟ್ ಮಾಡಿದ್ದಾರೆ.
ಕುಟುಂಬದ ಪೂರಕ ಸ್ಪಂದನೆ
ಇಟಲಿಯಲ್ಲಿ ನಡೆದ ಫೋಟೋಶೂಟ್‌ಗೂ ಅರ್ಜುನ್ ಸರ್ಜಾ ಹಾಗೂ ಪತ್ನಿ, ಅಂಜನಾ ಅವರ ಸಹೋದರಿ ಐಶ್ವರ್ಯಾ ಹಾಗೂ ಅವರ ಪತಿ ಉಪಸ್ಥಿತರಿದ್ದರು. ಎಲ್ಲರೂ ಒಟ್ಟಿಗೆ ಸೆಳೆಯುವ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದು, ಮಗಳ ಪ್ರೀತಿಗೆ ಕುಟುಂಬದವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಫಾರಿನ್ ಹುಡುಗನೊಂದಿಗೆ ಎಂಗೇಜ್ – ಮದುವೆ ವಿವರ ಬಾಕಿ
ಅಂಜನಾ ಸರ್ಜಾ ವಿದೇಶಿ ಯುವಕನಾದ ಐಯೆಸಾ (Aice) ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯ ದಿನಾಂಕ ಹಾಗೂ ವಿವರಗಳು ಇನ್ನಷ್ಟೆ ಬಹಿರಂಗವಾಗಬೇಕಿದೆ. ಆದರೆ ಅವರ ಸಂಗಾತಿಯ ಆಯ್ಕೆ ಬಗ್ಗೆ ಕುಟುಂಬದವರು ಖುಷಿಯಾಗಿದ್ದಾರೆ. ಫಾರಿನ್ ಹುಡುಗ ಐಸೆಯ ಜೊತೆ ಅಂಜನಾ ಎಂಗೇಜ್ ಆಗಿದ್ದು, ಅವರ ಮದುವೆಯ ಬಗ್ಗೆ ಇನ್ನೂ ಅಪ್‌ಡೇಟ್ ತಿಳಿಯಬೇಕಿದೆ. ಒಟ್ನಲ್ಲಿ ಅಂಜನಾ ಅವರ ಸಂಗಾತಿಯ ಆಯ್ಕೆ ಬಗ್ಗೆ ಕುಟುಂಬಸ್ಥರು ಖುಷಿಯಾಗಿದ್ದಾರೆ.
ಅಂಜನಾ ಸರ್ಜಾ, ಚಿತ್ರರಂಗದಿಂದ ದೂರವಿದ್ದು, ಫ್ಯಾಷನ್ ಉದ್ಯಮದಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ. ಅವರು ಹೈದರಾಬಾದ್‌ನ “Sarjaa” ಎಂಬ ಸಸ್ಯಾಧಾರಿತ ಹ್ಯಾಂಡ್‌ಬ್ಯಾಗ್ ಬ್ರ್ಯಾಂಡ್‌ನ ಸ್ಥಾಪಕರಾಗಿದ್ದಾರೆ. ಅವರು ಸಿಂಗಾಪುರದ ಲಾಸೆಲ್ ಕಾಲೇಜ್ ಆಫ್ ಆರ್ಟ್ಸ್ ಮತ್ತು ನ್ಯೂಯಾರ್ಕ್‌ನ ಪಾರ್ಸನ್ಸ್ ಡಿಸೈನ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ
ಈ ಹಿಂದೆ ಹಿರಿಯ ಪುತ್ರಿಯ ಮದುವೆ
ಅಂದಹಾಗೆ, ಅರ್ಜುನ್ ಸರ್ಜಾ ಮೊದಲ ಪುತ್ರಿ ನಟಿ ಐಶ್ವರ್ಯಾ ಅವರು ಕಳೆದ ವರ್ಷ ತಮಿಳು ನಟ ಉಮಾಪತಿ ಜೊತೆ ಹಸೆಮಣೆ ಏರಿದ್ದರು. ಕಳೆದ ಜೂನ್ 10ರಂದು ಚನ್ನೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಉಮಾಪತಿ ಅವರನ್ನು ನಟಿ ಪ್ರೀತಿಸಿ ಮದುವೆಯಾದರು.
🎉 ಅಂಜನಾ ಹಾಗೂ ಐಸೆಗೆ ನಾಳೆ ಇನ್ನಷ್ಟು ಹರ್ಷ, ಸಂಭ್ರಮ ಮತ್ತು ನೆಮ್ಮದಿ ಉಂಟಾಗಲಿ ಎಂಬದು ಅಭಿಮಾನಿಗಳ ಹಾರೈಕೆ!
ನಿಶ್ಚಿತಾರ್ಥದ ದೃಶ್ಯಾವಳಿಗಳನ್ನು ಈ ವಿಡಿಯೋದಲ್ಲಿ ನೋಡಬಹುದು