BBMP ಕಲ್ಯಾಣ ಯೋಜನೆಗಳು – 2024-25
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 🗓️ 02-05-2025
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನ ಬಜೆಟ್ ಅಡಿಯಲ್ಲಿ ಹಲವು ಕಲ್ಯಾಣ ಯೋಜನೆಗಳನ್ನು ಆರಂಭಿಸಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಯೋಜನೆಗಳ ಉದ್ದೇಶ, ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು, ಅಂಗವಿಕಲರು, ಪರಿಶಿಷ್ಟ ಜಾತಿ/ಪಂಗಡಗಳು, ತೃತೀಯ ಲಿಂಗಿಗಳು ಹಾಗೂ ಬಡ ವಿದ್ಯಾರ್ಥಿಗಳಿಗೆ ನೆರವಾಗುವುದು.
📋 ಯಾರು ಅರ್ಜಿ ಹಾಕಬಹುದು?
- ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳು
- ಆರ್ಥಿಕವಾಗಿ ಹಿಂದುಳಿದವರು
- ಪರಿಶಿಷ್ಟ ಜಾತಿ / ಪಂಗಡ, ಅಲ್ಪಸಂಖ್ಯಾತರು, ವಿಶೇಷಚೇತನರು
- ತೃತೀಯ ಲಿಂಗಿಗಳು, ಪೌರ ಕಾರ್ಮಿಕರು, ಉದ್ಯೋಗಸ್ಥ ಮಹಿಳೆಯರು
- ಗಮನಿಸಿ: ಈ ಹಿಂದೆ ಸಹಾಯಧನ ಪಡೆದವರು ಅರ್ಹರಾಗಿಲ್ಲ
🎯 ಪ್ರಮುಖ ಯೋಜನೆಗಳು:
- 🧵 ಉಚಿತ ಹೊಲಿಗೆ ಯಂತ್ರ: ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ
- 🛵 ಎಲೆಕ್ಟ್ರಿಕ್ ಸ್ಕೂಟರ್: ಗಾರ್ಮೆಂಟ್ಸ್ ಉದ್ಯೋಗಿಗಳಿಂದ ಪ್ರಥಮ ಆದ್ಯತೆ
- ♿ ಎಲೆಕ್ಟ್ರಿಕ್ ತ್ರಿಚಕ್ರ ವಾಹನ / ವೀಲ್ ಚೇರ್: ವಿಶೇಷ ಚೇತನರಿಗೆ
- 🧃 ಎಲೆಕ್ಟ್ರಿಕ್ ವೆಂಡಿಂಗ್ ಮೆಷಿನ್: ಬೀದಿಬದಿ ವ್ಯಾಪಾರಿಗಳಿಗೆ
- 💻 ಉಚಿತ ಲ್ಯಾಪ್ಟಾಪ್: ಪದವಿ ಪಡೆದ ಬಡ ವಿದ್ಯಾರ್ಥಿಗಳಿಗೆ
- 🎶 ಸಂಗೀತ/ಕ್ರೀಡೆ ಉಪಕರಣ ಸಹಾಯಧನ: ಪ್ರತಿಭಾವಂತರಿಗೆ
- 🏠 ಫ್ಲಾಟ್ ಖರೀದಿಗೆ ಧನ ಸಹಾಯ: ಅಮೃತ ಮಹೋತ್ಸವ ಯೋಜನೆ ಅಡಿ
- 🚕 ಆಟೋ/ಕಾರು ಖರೀದಿಗೆ ಸಹಾಯಧನ
- 💊 ಔಷಧಿ ಅಂಗಡಿ ಆರಂಭಿಸಲು ಪ್ರೋತ್ಸಾಹ ಧನ
- 🎓 ಶಾಲಾ ಶುಲ್ಕ ಮರುಪಾವತಿ / ವಿದೇಶ ವ್ಯಾಸಂಗ ಸಹಾಯಧನ
- 🧓 ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗೆ ಧನಸಹಾಯ
🗂️ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ ಪ್ರತಿ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ರೇಷನ್ ಕಾರ್ಡ್ ಪ್ರತಿ
- ವಾಸ ದೃಢೀಕರಣ (ವಿದ್ಯುತ್ ಬಿಲ್/ರೇಶನ್ ಕಾರ್ಡ್ ವಿಳಾಸ)
- ವಯಸ್ಸು ದೃಢೀಕರಣ ದಾಖಲೆ
📝 ಅರ್ಜಿಯ ನಮೂನೆ ಹಾಗೂ ಸಲ್ಲಿಕೆ:
- ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ
- ಅಗತ್ಯ ದಾಖಲೆಗಳ ಸ್ವ-ದೃಢೀಕೃತ ಪ್ರತಿಗಳೊಂದಿಗೆ
- ನೇರವಾಗಿ ಬಿಬಿಎಂಪಿಯ ವಲಯ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ ವಿಭಾಗ) ಕಚೇರಿಗೆ ಅರ್ಜಿ ಸಲ್ಲಿಸಿ.
📢 ಸೂಚನೆ: ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುವಂತೆ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಹರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!


