BMRCL ಮೆಟ್ರೋ ನೇಮಕಾತಿ 2025 – 150 ಮೆಂಟೆನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 2025 ನೇ ವರ್ಷದ ನೇಮಕಾತಿಗಾಗಿ 150 ಮೆಂಟೆನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಬೆಂಗಳೂರು – ಕರ್ನಾಟಕದ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಆಸಕ್ತರು 2025ರ ಮೇ 22ರೊಳಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
👉 ಹುದ್ದೆಯ ವಿವರ:
- ಸಂಸ್ಥೆ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL)
- ಒಟ್ಟು ಹುದ್ದೆಗಳು: 150
- ಹುದ್ದೆ ಹೆಸರು: ಮೆಂಟೆನರ್ (Maintainer)
- ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
- ವೇತನ ಶ್ರೇಣಿ: ತಿಂಗಳಿಗೆ ₹25,000 ರಿಂದ ₹59,060 ರವರೆಗೆ
✅ ಅರ್ಹತೆಗಳು:
- ಶೈಕ್ಷಣಿಕ ಅರ್ಹತೆ: 10ನೇ ತರಗತಿ ಹಾಗೂ ITI ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು (ಮಾನ್ಯತೆಯಾದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ).
- ವಯೋಮಿತಿ: 23-04-2025 ರಂದು ಅಭ್ಯರ್ಥಿಯ ಗರಿಷ್ಠ ವಯಸ್ಸು 50 ವರ್ಷವಾಗಿರಬೇಕು.
- ವಯೋಸಡಿಕೆ ಸಡಿಲಿಕೆ: BMRCL ನಿಯಮಾನುಸಾರ ಲಭ್ಯವಿದೆ.
📬 ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಳಾಸ:
The General Manager (HR),
Bangalore Metro Rail Corporation Limited,
III Floor, BMTC Complex, K.H. Road,
Shanthinagar, Bengaluru – 560027
🗓 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಏಪ್ರಿಲ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಮೇ 2025
- ಸಹಿ ಹಾಕಿದ ಅರ್ಜಿಯ ಪ್ರಿಂಟ್ ಕಾಪಿ ಕಳುಹಿಸಲು ಕೊನೆಯ ದಿನಾಂಕ: 27 ಮೇ 2025
🔗 ಮುಖ್ಯ ಲಿಂಕ್‌ಗಳು:
ಹೆಚ್ಚಿನ ಮಾಹಿತಿಗಾಗಿ BMRCL ನ ಅಧಿಕೃತ ಜಾಲತಾಣ ಭೇಟಿನೀಡಿ. ನಿಮ್ಮ ಅರ್ಜಿ ಸಲ್ಲಿಕೆಯನ್ನು ಸಮಯದಲ್ಲಿ ಮುಗಿಸಿ – ಉತ್ತಮ ಭವಿಷ್ಯಕ್ಕೆ ಮೆಟ್ರೋ ಮಾರ್ಗ ತೆರೆದುಕೊಳ್ಳಲಿ.! 🚇✨

