BPNL ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ
ಒಟ್ಟು ಹುದ್ದೆಗಳು: 12,981 | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-05-2025
ಉದ್ಯೋಗ ಹುಡುಕುವವರಿಗೆ ಮತ್ತೊಂದು ಉತ್ತಮ ಅವಕಾಶ! ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಖಾಲಿ ಇರುವ 12,981 ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳ ಪೈಕಿ, ಸುಮಾರು 690 ಹುದ್ದೆಗಳು ಕರ್ನಾಟಕ ರಾಜ್ಯದಲ್ಲಿಯೂ ಲಭ್ಯವಿದ್ದು, 10ನೇ ಮತ್ತು 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರು.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ಅರ್ಹತೆ | ವಯೋಮಿತಿ |
|---|---|---|---|
| ಮುಖ್ಯ ಯೋಜನಾ ಅಧಿಕಾರಿ | 44 | CA, CS, ಸ್ನಾತಕೋತ್ತರ ಪದವಿ, MVSc, MBA, ME/MTech, MSc | 40-65 ವರ್ಷಗಳು |
| ಜಿಲ್ಲಾ ವಿಸ್ತರಣಾಧಿಕಾರಿ | 440 | ಪದವಿ | 25-40 ವರ್ಷಗಳು |
| ತಹಸಿಲ್ ಅಭಿವೃದ್ಧಿ ಅಧಿಕಾರಿ | 2,121 | 12ನೇ ತರಗತಿ | 21-40 ವರ್ಷಗಳು |
| ಪಂಚಾಯತ್ ಪಶು ಸೇವಕ | 10,376 | 10ನೇ ತರಗತಿ | 18-40 ವರ್ಷಗಳು |
ಅರ್ಜಿ ಶುಲ್ಕ:
| ಹುದ್ದೆ | ಅರ್ಜಿ ಶುಲ್ಕ (ರೂ) |
|---|---|
| ಮುಖ್ಯ ಯೋಜನಾ ಅಧಿಕಾರಿ | ₹1,534 |
| ಜಿಲ್ಲಾ ವಿಸ್ತರಣಾಧಿಕಾರಿ | ₹1,180 |
| ತಹಸಿಲ್ ಅಭಿವೃದ್ಧಿ ಅಧಿಕಾರಿ | ₹944 |
| ಪಂಚಾಯತ್ ಪಶು ಸೇವಕ | ₹708 |
ಸೂಚನೆ:
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ:
- ಆನ್ಲೈನ್ ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: www.bharatiyapashupalan.com
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅಗತ್ಯವಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು ಪ್ರತಿಯನ್ನು ಸೇವ್ ಮಾಡಿ.
⏳ ಕೊನೆಯ ದಿನಾಂಕ: 11-05-2025
ಸೂಚನೆ: ಅರ್ಹತೆ, ಹುದ್ದೆಯ ವಿವರಗಳು ಮತ್ತು ಇತರ ಮಾಹಿತಿ ಗಮನಪೂರ್ವಕವಾಗಿ ಓದಿ ಅರ್ಜಿ ಸಲ್ಲಿಸಿ.

