Crop relief ಬೆಳೆ ಪರಿಹಾರ 38.5 ಲಕ್ಷ ರೈತರ ಖಾತೆಗೆ ₹3535 ಕೋಟಿ ಜಮಾ!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೇ 2025ರ ಹೊತ್ತಿಗೆ ಎರಡು ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ ರೈತರ ಬೆಳೆ ಹಾನಿಗೆ ಪರಿಹಾರವಾಗಿ ಭಾರೀ ಮೊತ್ತದ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಈ ಕುರಿತು ಸರಕಾರದಿಂದ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಬಿದ್ದಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ.
2024-25ರ ಬೆಳೆ ಹಾನಿಗೆ ₹3535 ಕೋಟಿ ಪರಿಹಾರ
2024-25ನೇ ಸಾಲಿನಲ್ಲಿ ಪೂರ್ವ ಮುಂಗಾರು, ಮುಂಗಾರು ಮತ್ತು ಹಿಂಗಾರು ಋತುವುಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಸುಮಾರು 38.5 ಲಕ್ಷ ರೈತರು ಬೆಳೆ ಹಾನಿಗೆ ಒಳಗಾಗಿದ್ದರು. ಇದಕ್ಕಾಗಿ ರಾಜ್ಯ ಸರ್ಕಾರವು ₹3535 ಕೋಟಿ ರೂಪಾಯಿಗಳನ್ನು ನೇರವಾಗಿ ಈ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಈ ಹಣವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನಗದು ರೂಪದಲ್ಲಿ ಜಮಾ ಮಾಡಲಾಗಿದೆ.
Parihara ತಂತ್ರಾಂಶದ ಮೂಲಕ ನೇರ ಹಣ ವರ್ಗಾವಣೆ
ರೈತರ ಪರಿತಪ್ತಿಯನ್ನು ನಿಗದಿ ಸಮಯದಲ್ಲಿ ಪರಿಹರಿಸಲು ಹಾಗೂ ಯಾವುದೇ ಅವ್ಯವಹಾರವಿಲ್ಲದೇ ಪರಿಹಾರದ ಹಣ ಜಮಾ ಮಾಡಲು Parihara ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಹೆಸರು, ಜಮೀನು ಮಾಹಿತಿ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಅಪ್‌ಡೇಟ್ ಮಾಡಿ ನೇರ ಹಣ ಜಮೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದಾರೆ.
ನಿಮ್ಮ ಹಣ ಜಮಾ ಆಗಿದೆಯಾ? ಮೊಬೈಲ್‌ನಲ್ಲೇ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಪರಿಹಾರದ ಹಣ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಮನೆಯಿಂದಲೇ ಇಲ್ಲಿರುವ ಸರಳ ವಿಧಾನವನ್ನು ಅನುಸರಿಸಿ ಚೆಕ್ ಮಾಡಬಹುದು:
ಹೆಜ್ಜೆ 1: ಈ ಲಿಂಕ್‌ಗೆ ಭೇಟಿ ನೀಡಿ 👉 Bele Parihara Status Check
ಹೆಜ್ಜೆ 2: ಪುಟದ ಕೆಳಭಾಗದಲ್ಲಿ ಇರುವ “Village Wise List” ಆಯ್ಕೆಮೇಲೆ ಕ್ಲಿಕ್ ಮಾಡಿ.
ಹೆಜ್ಜೆ 3: ನಂತರ ನಿಮ್ಮ ವರ್ಷದ ಆಯ್ಕೆ, ಋತು, ವಿಪತ್ತಿನ ಪ್ರಕಾರ, ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಹಳ್ಳಿಯ ವಿವರಗಳನ್ನು ಆಯ್ಕೆ ಮಾಡಿ “Get Report” ಬಟನ್ ಕ್ಲಿಕ್ ಮಾಡಿ.
ಇದರಿಂದ ನಿಮ್ಮ ಹಳ್ಳಿಯಲ್ಲಿ ಪರಿಹಾರ ಹಣ ಯಾರಿಗೆ ಎಷ್ಟು ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ.
ಪಟ್ಟಿಯಲ್ಲಿ ದೊರಕುವ ಮಾಹಿತಿ ಏನು?
ಈ ಪಟ್ಟಿಯಲ್ಲಿ ಕೆಳಕಂಡ ವಿವರಗಳನ್ನು ನೋಡಬಹುದು:
- ರೈತನ ಹೆಸರು
- ಹಾನಿಯಾದ ಜಮೀನಿನ ಮಾಹಿತಿ
- ಹಣ ಜಮಾ ಆದ ದಿನಾಂಕ
- ಪರಿಹಾರದ ಮೊತ್ತ
ಹಣ ಸಿಕ್ಕಿಲ್ಲವೇ? ಎಲ್ಲಿ ಸಂಪರ್ಕಿಸಬೇಕು?
ನೀವು ಪರಿಹಾರದ ಅರ್ಜಿ ಸಲ್ಲಿಸಿದ್ದರೂ ಹಣ ಖಾತೆಗೆ ಬಾರದೇ ಇದ್ದರೆ, ತಕ್ಷಣವೇ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಭೇಟಿಯಾಗಿ ನಿಮ್ಮ ಅರ್ಜಿಯ ಸ್ಥಿತಿ ಹಾಗೂ ಪರಿಶೀಲನೆ ಮಾಡಿಕೊಳ್ಳಬಹುದು.
ವಾರತಾ ಇಲಾಖೆಯ ಟ್ವಿಟರ್ ಪೋಸ್ಟ್
ರಾಜ್ಯ ವಾರ್ತಾ ಇಲಾಖೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಪರಿಹಾರದ ಬಗ್ಗೆ ಹಂಚಿಕೊಂಡ ಟ್ವೀಟ್ ಇಲ್ಲಿದೆ:
🔗 Twitter Post – Karnataka Varthe
ಈ ರೀತಿಯಾಗಿ ರಾಜ್ಯ ಸರ್ಕಾರವು ಕೃಷಿಕರ ಬೆಳೆ ಹಾನಿಯನ್ನು ಗಂಭೀರವಾಗಿ ಪರಿಗಣಿಸಿ ಭಾರಿ ಮೊತ್ತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದು, ರೈತರು ಈ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವುದು ಅತೀ ಮುಖ್ಯ.

