Hack ⚠️ ಎಚ್ಚರಿಕೆ: ವಾಟ್ಸಪ್ನಲ್ಲಿ ಫೋಟೋ ಡೌನ್ಲೋಡ್ ಮಾಡೋದ್ರಿಂದ ಫೋನ್ ಹ್ಯಾಕ್ ಆಗಬಹುದು!
ನೀವು ವಾಟ್ಸಪ್ನಲ್ಲಿ ಬರುವ ಪ್ರತಿಯೊಂದು ಫೋಟೋವನ್ನೂ ಡೌನ್ಲೋಡ್ ಮಾಡುತ್ತಿದ್ದರೆ, ಈಗಲೇ ಎಚ್ಚರವಾಗಿಯೇ ಉಳಿತ್ತಿರಿ.! ಈಗ ಹೊಸ ರೀತಿಯ ಸೈಬರ್ ದಾಳಿ ಪದ್ದತಿ ಬೆಳಕಿಗೆ ಬಂದಿದೆ – ಫೋಟೋ ಮೂಲಕವೇ ನಿಮ್ಮ ಮೊಬೈಲ್ ಹ್ಯಾಕ್(hack) ಆಗುವ ಸಾಧ್ಯತೆ ಇದೆ.
📷 ಫೋಟೋ ಮೂಲಕ ಹೇಗೆ ಹ್ಯಾಕ್ ಮಾಡ್ತಾರೆ?
ಇದುವರೆಗೆ ಸೈಬರ್ ಕ್ರಿಮಿನಲ್ಗಳು ಫೇಕ್ ಲಿಂಕ್ಗಳನ್ನು ಕಳುಹಿಸಿ ಫೋನ್ ಹ್ಯಾಕ್ ಮಾಡುತ್ತಿದ್ದರು. ಆದರೆ ಈಗ ಅವರು ಫೋಟೋವನ್ನೇ ಮಾಲ್ವೇರ್ (Malware) ಜೊತೆ ತಯಾರಿಸಿ ಕಳುಹಿಸುತ್ತಿದ್ದಾರೆ. ಈ ಚಿತ್ರವನ್ನೂ ನೀವು ವಾಟ್ಸಪ್ನಲ್ಲಿ ಡೌನ್ಲೋಡ್ ಮಾಡಿದರೆ, ಮಾಲ್ವೇರ್ ನಿಮ್ಮ ಫೋನ್ಗೆ ನುಸುಳುತ್ತದೆ.
ಇದರಿಂದ ನಿಮ್ಮ:
- ಪಾಸ್ವರ್ಡ್ಗಳು
- OTP
- ಬ್ಯಾಂಕ್ ಹಾಗೂ UPI ವಿವರಗಳು
ಎಲ್ಲವೂ ಅಪಾಯಕ್ಕೀಳಾಗಬಹುದು. ಕೆಲವೊಮ್ಮೆ ಫೋನ್ನ ಸಂಪೂರ್ಣ ನಿಯಂತ್ರಣ ಕೂಡ ದಾಳಿಕೋರರ ಕೈಗೆ ಸಿಕ್ಕಬಹುದು!
📍 ಘಟನೆಯೊಂದು: ಜಬಲ್ಪುರದಲ್ಲಿ 2 ಲಕ್ಷ ರೂ. ನಷ್ಟ!
ಮಧ್ಯಪ್ರದೇಶದ ಜಬಲ್ಪುರದಲ್ಲಿ ವ್ಯಕ್ತಿಯೊಬ್ಬರಿಗೆ ಅಪರಿಚಿತ ನಂಬರ್ನಿಂದ ವಾಟ್ಸಪ್ ಸಂದೇಶವೊಂದು ಬಂದಿದೆ. ಸಂದೇಶದಲ್ಲಿದ್ದ ಫೋಟೋವನ್ನಾಳೆ ನೋಡಿ “ಇವನನ್ನು ಗುರುತಿಸಬಲ್ಲಿರಾ?” ಅಂತ ಕೇಳಲಾಗಿತ್ತು. ನಿರಂತರ ಕರೆಗಳಿಂದ ತೊಂದರೆ ಆದ ಅವರು ಕೊನೆಗೆ ಫೋಟೋ ಕ್ಲಿಕ್ ಮಾಡಿದರೆ, ಹೀಗೇ ಮೊಬೈಲ್ ಹ್ಯಾಕ್ ಆಗಿ, 2 ಲಕ್ಷ ರೂಪಾಯಿಗಳಷ್ಟು ಹಣ ಕಳೆದುಕೊಂಡಿದ್ದಾರೆ.
❓ಮಾಲ್ವೇರ್ ಎಂದರೆ ಏನು?
ಮಾಲ್ವೇರ್ ಎಂದರೆ “Malicious Software”– ಇದು ನಿಮ್ಮ ಅನುಮತಿ ಇಲ್ಲದೆ ಫೋನ್ಗೆ ನುಸುಳುತ್ತದೆ, ಹಾನಿ ಮಾಡುತ್ತದೆ ಅಥವಾ ಮಾಹಿತಿ ಕದ್ದೊಯ್ಯುತ್ತದೆ.
🔐 ಹೀಗೆ ಮಾಲ್ವೇರ್ನಿಂದ ತಪ್ಪಿಸಿಕೊಳ್ಳಿ:
✅ ಅಪರಿಚಿತ ನಂಬರ್ಗಳಿಂದ ಬರುವ ಫೋಟೋ, ವಿಡಿಯೋ ಅಥವಾ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
✅ ವಾಟ್ಸಪ್ ಸೆಟ್ಟಿಂಗ್ಸ್ > Storage & Data > Media auto-download > ಎಲ್ಲಾ ಆಯ್ಕೆಗಳನ್ನು “No”ಗೆ ಸೆಟ್ ಮಾಡಿ.
✅ ಅನುಮಾನಾಸ್ಪದ ಸಂಖ್ಯೆಗಳನ್ನ ತಕ್ಷಣ Report ಮಾಡಿ ಹಾಗೂ Block ಮಾಡಿರಿ.
✅ ಸ್ನೇಹಿತರು, ಕುಟುಂಬದವರಿಗೆ ಈ ಬಗ್ಗೆ ತಿಳಿಸಿ – ವಿಶೇಷವಾಗಿ ಮೊಬೈಲ್ ಬಗ್ಗೆ ಹೆಚ್ಚಿನ ತಿಳಿದಿರದವರಿಗೆ.
✅ ಈಗಾಗಲೇ ಬಲಿಯಾಗಿದ್ದರೆ ಅಥವಾ ಅಪಾಯಕ್ಕೀಳಾಗಿದ್ದರೆ, ತಕ್ಷಣವೇ ಸೈಬರ್ ಕ್ರೈಮ್ ಪೋರ್ಟಲ್ಗೆ ತೆರಳಿ ದೂರು ನೀಡಿ:
🌐 www.cybercrime.gov.in
ಸೂಚನೆ: ತಂತ್ರಜ್ಞಾನ ಉಪಯೋಗಿಸುವಾಗ ಜಾಗರೂಕತೆ ಅತ್ಯವಶ್ಯ. ನಿಮ್ಮ ಡಿಜಿಟಲ್ ಸುರಕ್ಷತೆ ನಿಮ್ಮ ಕೈಯಲ್ಲಿದೆ.

