Income Tax Department: ಆದಾಯ ತೆರಿಗೆ ಇಲಾಖೆ ನೇಮಕಾತಿ 2025: ಅರ್ಜಿ ಆಹ್ವಾನ.!
Income Tax Department ಆದಾಯ ತೆರಿಗೆ ಇಲಾಖೆ 2025 ನೇಮಕಾತಿಗಾಗಿ ಅರ್ಹ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಹೊಂದಿರುವ ಅಭ್ಯರ್ಥಿಗಳಿಂದ (Sportspersons) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ಟೆನೋಗ್ರಾಫರ್, ಟ್ಯಾಕ್ಸ್ ಅಸಿಸ್ಟಂಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಇಲ್ಲಿಯೇ ಪರಿಶೀಲಿಸಿ.
ಖಾಲಿ ಹುದ್ದೆಗಳ ವಿವರ:
ಹುದ್ದೆಗಳ ಹೆಸರು:
- ಸ್ಟೆನೋಗ್ರಾಫರ್ ಗ್ರೇಡ್-2 – 2 ಹುದ್ದೆಗಳು
- ಟ್ಯಾಕ್ಸ್ ಅಸಿಸ್ಟಂಟ್ – 28 ಹುದ್ದೆಗಳು
- ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 26 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ: 56
ಕರ್ತವ್ಯ ಸ್ಥಳ: ಆಯ್ಕೆಗೊಂಡ ಅಭ್ಯರ್ಥಿಗಳು ಭಾರತದೆಲ್ಲೆಡೆ ಕಾರ್ಯನಿರ್ವಹಿಸಬೇಕು.
ಶೈಕ್ಷಣಿಕ ಅರ್ಹತೆ:
- ಸ್ಟೆನೋಗ್ರಾಫರ್ ಗ್ರೇಡ್-2: ಕನಿಷ್ಠ 12ನೇ ತರಗತಿ ಅಥವಾ ತತ್ಸಮಾನ ಅರ್ಹತೆ.
- ಟ್ಯಾಕ್ಸ್ ಅಸಿಸ್ಟಂಟ್: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
- ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS): ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
ವಯೋಮಿತಿ (01-01-2025
- ಸ್ಟೆನೋಗ್ರಾಫರ್ ಗ್ರೇಡ್-2: 18 ರಿಂದ 27 ವರ್ಷ
- ಟ್ಯಾಕ್ಸ್ ಅಸಿಸ್ಟಂಟ್: 18 ರಿಂದ 27 ವರ್ಷ
- ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS): 18 ರಿಂದ 25 ವರ್ಷ
ವಯೋಮಿತಿ ಸಡಿಲಿಕೆ:
- SC/ST ಅಭ್ಯರ್ಥಿಗಳು – 10 ವರ್ಷ ಹೆಚ್ಚುವರಿ ಸಡಿಲಿಕೆ
- OBC/ಸಾಮಾನ್ಯ ವರ್ಗದ ಅಭ್ಯರ್ಥಿಗಳು – 05 ವರ್ಷ ಹೆಚ್ಚುವರಿ ಸಡಿಲಿಕೆ
ವೇತನ ಶ್ರೇಣಿ:
- ಸ್ಟೆನೋಗ್ರಾಫರ್ ಗ್ರೇಡ್-2: ₹25,500 – ₹81,100
- ಟ್ಯಾಕ್ಸ್ ಅಸಿಸ್ಟಂಟ್: ₹25,500 – ₹81,100
- ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS): ₹18,000 – ₹56,900
ಅರ್ಜಿ ಸಲ್ಲಿಕೆ ವಿಧಾನ:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಂತಗಳು:
- ಅಧಿಸೂಚನೆಯನ್ನು ಓದಿ: ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದಿ.
- ಆಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಅಧಿಸೂಚನೆಯಲ್ಲಿ ನೀಡಲಾದ ಲಿಂಕ್ ಮೂಲಕ ಅರ್ಜಿಯನ್ನು ತೆರೆಯಿರಿ.
- ಅರ್ಜಿಯನ್ನು ಭರ್ತಿ ಮಾಡಿ: ಅಗತ್ಯ ವಿವರಗಳು (ಹೆಸರು, ವಿಳಾಸ, ವಿದ್ಯಾರ್ಹತೆ, ಸಂಪರ್ಕ ಸಂಖ್ಯೆ) ಸರಿಯಾಗಿ ಭರ್ತಿ ಮಾಡಿ.
- ದಾಖಲೆಗಳನ್ನು ಅಪ್‌ಲೋಡ್ ಮಾಡಿ: (ಅಗತ್ಯವಿದ್ದರೆ) ಅಗತ್ಯ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಅರ್ಜಿ ಸಲ್ಲಿಸಿ: ಎಲ್ಲಾ ವಿವರಗಳನ್ನು ಪರಿಶೀಲಿಸಿ, ಯಾವುದೇ ದೋಷವಿಲ್ಲದೆ ಅರ್ಜಿಯನ್ನು ಸಲ್ಲಿಸಿ.
ಅರ್ಜಿಯ ಶುಲ್ಕ: ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಕೆ ದಿನಾಂಕ:
- ಆರಂಭ ದಿನಾಂಕ: 15 ಮಾರ್ಚ್ 2025
- ಕೊನೆ ದಿನಾಂಕ: 05 ಏಪ್ರಿಲ್ 2025
ಮುಖ್ಯ ಲಿಂಕ್‌ಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ: [CLICK HERE]
ಕೊನೆ ಮಾತು: ಈ ನೇಮಕಾತಿ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯದಿರಿ.!


