Rain ರಾಜ್ಯದಲ್ಲಿ ಮುಂದಿನ 4-5 ದಿನ ಭಾರಿ ಮಳೆಯ ಎಚ್ಚರಿಕೆ: ಹವಾಮಾನ ಇಲಾಖೆ ಮುನ್ಸೂಚನೆ
ರಾಜ್ಯದಲ್ಲಿ ಮುಂದಿನ ನಾಲ್ಕು ರಿಂದ ಐದು ದಿನಗಳವರೆಗೆ ಗುಡುಗು-ಸಿಡಿಲಿನ ಅರ್ಭಟದೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಕೂಡ ಇದೆ.
ಮಳೆ ನಿರೀಕ್ಷೆ ಇರುವ ಪ್ರಮುಖ ಜಿಲ್ಲೆಗಳು:
- ಏಪ್ರಿಲ್ -28 ರಂದು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
- ಏಪ್ರಿಲ್ 30 ರವರೆಗೆ ಭಾರಿ ಮಳೆಯಾಗುವ ಜಿಲ್ಲೆಗಳು:
- ಉತ್ತರ ಕನ್ನಡ, ಉಡುಪಿ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ
- ದಾವಣಗೆರೆ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ
- ದಕ್ಷಿಣ ಕನ್ನಡ, ವಿಜಯಪುರ, ಮೈಸೂರು, ಕೊಡಗು, ತುಮಕೂರು, ಮಂಡ್ಯ, ರಾಮನಗರ
- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ
ಹವಾಮಾನ ಇಲಾಖೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ ಮತ್ತು ಸುರಕ್ಷತೆಗಾಗಿ ಕೆಲವೆ ಮೂಲಭೂತ ಸಲಹೆಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.
ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮಗಳು
✅ ಹೊರಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿಯೂ ಹವಾಮಾನ ಮುನ್ಸೂಚನೆಗಳನ್ನು ಗಮನಿಸಿ.
✅ ಗುಡುಗು-ಸಿಡಿಲಿನ ವೇಳೆ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸಿ:
- ಸುರಕ್ಷಿತ ಕಟ್ಟಡ ಅಥವಾ ಆಶ್ರಯ ಸ್ಥಳದಲ್ಲಿ ಉಳಿಯಿರಿ.
- ಲೋಹದ ತಗಡಿನಿಂದ ಹೊಂದಿದ ಮನೆಗಳು ಸುರಕ್ಷಿತವಲ್ಲ. ಭದ್ರ ಕಟ್ಟಡದಲ್ಲಿ ಆಶ್ರಯ ಪಡೆಯಿರಿ.
- ಬೆಟ್ಟ, ಶಿಖರ ಅಥವಾ ಎತ್ತರ ಪ್ರದೇಶಗಳಲ್ಲಿ ಉಳಿಯದೇ ತಗ್ಗು ಪ್ರದೇಶಗಳಿಗೆ ಇಳಿದು ಬನ್ನಿ.
- ಕೆರೆ, ನದಿಗಳಂತಹ ನೀರಿನ ಮೂಲಗಳಿಂದ ದೂರವಿರಿ.
- ವಿದ್ಯುತ್ ಕಂಬಗಳು, ಮೊಬೈಲ್ ಟವರ್‌ಗಳು, ಪವನ ವಿದ್ಯುತ್ ಗೋಪುರಗಳಿಂದ ದೂರವಿರಿ.
✅ ವಾಹನ ಚಾಲನೆ ಮಾಡುತ್ತಿದ್ದರೆ ತಕ್ಷಣವೇ ನಿಲ್ಲಿಸಿ ವಾಹನದೊಳಗೆ ಉಳಿಯಿರಿ.
✅ ಗುಂಪಿನಲ್ಲಿ ಇದ್ದರೆ ಪರಸ್ಪರ ದೂರವಿದ್ದು ಅಪಾಯವನ್ನು ತಪ್ಪಿಸಿ.
✅ ವಿದ್ಯುತ್ ಅಥವಾ ದೂರವಾಣಿ ಕಂಬಗಳ ಕೆಳಗೆ ಆಶ್ರಯ ಪಡೆಯಬೇಡಿ.
✅ ಮೊಬೈಲ್ ಫೋನ್ ಬಳಸುವುದನ್ನು, ಕಬ್ಬಿಣದ ಛತ್ರಿಗಳನ್ನು ಬಳಸುವುದನ್ನು ತಡೆಯಿರಿ.
✅ ಮನೆಗಳಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸುರಕ್ಷಿತವಾಗಿರಿ.
✅ ಸಿಡಿಲಿನ ಸಂದರ್ಭದಲ್ಲಿ ಸ್ನಾನ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದನ್ನು ತಪ್ಪಿಸಿ.
✅ ಆಟದ ಮೈದಾನಗಳು, ಉದ್ಯಾನವನಗಳು, ಈಜುಕೊಳಗಳು, ಕಡಲತೀರ ಪ್ರದೇಶಗಳಿಗೆ ಹೋಗುವುದನ್ನು ತಡೆಯಿರಿ.
✅ ಮುನ್ನೆಚ್ಚರಿಕೆ ಇರುವ ಸಂದರ್ಭದಲ್ಲಿ ದೋಣಿ ಅಥವಾ ಈಜಾಟದ ಕ್ರಿಯೆಗಳನ್ನು ಸ್ಥಗಿತಗೊಳಿಸಿ.
✅ ಅರಣ್ಯ ಪ್ರದೇಶಗಳಲ್ಲಿ ಹಾರುವ ಅಥವಾ ಮುರಿದು ಬೀಳುವ ಮರಗಳಿಂದ ದೂರವಿರಿ.
✅ ಮಕ್ಕಳನ್ನು, ವಯೋವೃದ್ಧರನ್ನು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಿ.
ಸಾಮಾನ್ಯ ಮುನ್ನೆಚ್ಚರಿಕೆ:
ಸಿಡಿಲಿನ ಸಮಯದಲ್ಲಿ ತೆರೆದ ವಾಹನ ಅಥವಾ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಬೇಡಿ. ಹವಾಮಾನ ಇಲಾಖೆ ನೀಡುವ ಎಲ್ಲ ಎಚ್ಚರಿಕೆಗಳನ್ನು ಗಮನಿಸಿ ಮತ್ತು ಮುಂಜಾಗ್ರತೆಯೊಂದಿಗೆ ವರ್ತಿಸಿ.

