Monday, March 2, 2026
spot_img
HomeNewsRBI 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬಂಪರ್ ಸುದ್ದಿ.!

RBI 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬಂಪರ್ ಸುದ್ದಿ.!

RBI ಹೊಸ ಕ್ರಮ: 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಬಂಪರ್ ಸುದ್ದಿಗಳು.!

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಕ್ಕಳಿಗಾಗಿ ಮಹತ್ವಪೂರ್ಣ ಸುದ್ದಿ ಪ್ರಕಟಿಸಿದೆ. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತಮ್ಮದೇ ಆದ ಉಳಿತಾಯ ಅಥವಾ ಅವಧಿ ಠೇವಣಿ (Term Deposit) ಖಾತೆಗಳನ್ನು ತೆಗೆಯಲು ಮತ್ತು ನಿರ್ವಹಿಸಲು ಅವಕಾಶ ನೀಡಲಾಗಿದೆ. ಈ ಹೊಸ ಕ್ರಮವು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹಣಕಾಸು ನಿರ್ವಹಣೆಯನ್ನು ಕಲಿಯಲು ಸಹಾಯ ಮಾಡಲಿದೆ.

RBI  ಹೊಸ ಆದೇಶದ ಪ್ರಯೋಜನಗಳು

ಆರ್‌ಬಿಐನ ಹೊಸ ಕ್ರಮದ ಮೂಲಕ, 10 ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ಖಾತೆಗಳನ್ನು ಸ್ವತಂತ್ರವಾಗಿ ತೆಗಿ ನಿರ್ವಹಿಸಲು ಅವಕಾಶವನ್ನು ಪಡೆಯುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಉಳಿತಾಯ, ವೆಚ್ಚ ನಿರ್ವಹಣೆ ಮತ್ತು ಹೂಡಿಕೆಗಳ ಬಗ್ಗೆ ಅರಿವು ಮೂಡಲು ಸಹಾಯವಾಗಲಿದೆ. ಇದನ್ನು ಮೂಲಕ ಅವರ ಹಣಕಾಸು ಜ್ಞಾನವನ್ನು ಸದೃಢಗೊಳಿಸಬಹುದು, ಇದರಿಂದ ಭವಿಷ್ಯದಲ್ಲಿ ಆರ್ಥಿಕ ದೃಷ್ಟಿಯಿಂದ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಹೊಸ ಕ್ರಮದಲ್ಲಿ ಏನು ಬದಲಾವಣೆ.?

ಆರ್‌ಬಿಐನ ಹೊಸ ಆದೇಶವು 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ತಮ್ಮದೇ ಆದ ಉಳಿತಾಯ ಅಥವಾ ಅವಧಿ ಠೇವಣಿ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ಅವಕಾಶ ನೀಡುತ್ತದೆ. ಈ ಆದೇಶವನ್ನು ದೇಶದ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಹೊರಡಿಸಿದೆ. ಇದರಂತೆ, ಮಕ್ಕಳಿಗೆ ಪೋಷಕರ ಸಹಮತಿಯೊಂದಿಗೆ ತಮ್ಮ ಖಾತೆಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

WhatsApp Group Join Now
Telegram Group Join Now

ಮುಖ್ಯ ಮಾಹಿತಿಗಳು:

  • 10 ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ಖಾತೆಗಳನ್ನು ಸ್ವತಂತ್ರವಾಗಿ ತೆಗೆಯಬಹುದು.
  • ಪೋಷಕರ ಅನುಮತಿಯೊಂದಿಗೆ ಸೇವಿಂಗ್ಸ್ ಖಾತೆಗಳನ್ನು ಆರಂಭಿಸಬಹುದಾಗಿದೆ.
  • ಖಾತೆಗಳ ನಿರ್ವಹಣೆ ಮತ್ತು ವಹಿವಾಟುಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.
  • ಬ್ಯಾಂಕುಗಳಿಗೆ ಖಾತೆಗಳಲ್ಲಿ ವಹಿವಾಟು ಮಾಡಿದಂತೆ ಮುತುವರ್ಜಿಯನ್ನು ನೀಡಲು ಆರ್‌ಬಿಐ ಸೂಚನೆ ನೀಡಿದೆ.

RBI ನಾ ಈ ಹೊಸ ಕ್ರಮವು ಮಕ್ಕಳಿಗೆ ಹಣಕಾಸು ನಿರ್ವಹಣೆಯಲ್ಲಿ ಜವಾಬ್ದಾರಿ ಹೆಚ್ಚಿಸಲು ಮತ್ತು ಅವರ ಲಾಭಕ್ಕಾಗಿ ದೊಡ್ಡ ಹೆಜ್ಜೆ ಹಾಕಲು ಸಹಾಯ ಮಾಡುವುದಾಗಿ ನಿರೀಕ್ಷಿಸಲಾಗಿದೆ.


 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments