SSLC ಟಾಪರ್ ಲ್ಯಾಪ್ಟಾಪ್ ಯೋಜನೆ 2025
ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಸರ್ಕಾರದ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಲಿದ್ದು, ಈ ಯೋಜನೆಯಿಂದ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ಲಾಭ ಪಡೆಯಲಿದ್ದಾರೆ.
ಯೋಜನೆಯ ಉದ್ದೇಶ:
ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ತಾಂತ್ರಿಕವಾಗಿ ನಿರಂತರವಾಗಿ ಪ್ರಗತಿಪಥದಲ್ಲಿರಬೇಕೆಂಬ ಉದ್ದೇಶದಿಂದ ಗ್ರಾಮೀಣ ಹಾಗೂ ಬಡ ಕುಟುಂಬದ ಮಕ್ಕಳಿಗೆ ಈ ಡಿಜಿಟಲ್ ಸಾಧನವನ್ನು ನೀಡಲಾಗುತ್ತಿದೆ.
ಯಾರಿಗೆ ಲ್ಯಾಪ್ಟಾಪ್ ಸಿಗಲಿದೆ?
ರಾಜ್ಯದ ಪ್ರತಿಯೊಂದು ಶಿಕ್ಷಣ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ.
ಜೊತೆಗೆ, ತಾಲ್ಲೂಕು ಮಟ್ಟದ ಮೊದಲ ಮೂರು ಟಾಪರ್ಗಳಿಗೂ ಲ್ಯಾಪ್ಟಾಪ್ ವಿತರಣೆ ನಡೆಯಲಿದೆ.
ಒಟ್ಟು ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ:
ಜಿಲ್ಲಾ ಮಟ್ಟ: 115 ವಿದ್ಯಾರ್ಥಿಗಳು
ಬ್ಲಾಕ್ ಮಟ್ಟ: 641 ವಿದ್ಯಾರ್ಥಿಗಳು
ಒಟ್ಟು: 756 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ
ಆರ್ಥಿಕ ಅನುಮಾನಗಳು ಮತ್ತು ಪ್ರಗತಿ:
ಲ್ಯಾಪ್ಟಾಪ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸರಬರಾಜುದಾರರ ಆಯ್ಕೆ ಈಗಾಗಲೇ ನಡೆದಿದೆ.

₹3.25 ಕೋಟಿ ಅನುದಾನದ ಅವಶ್ಯಕತೆ ಇದೆ.
ಈಗಾಗಲೇ ₹80 ಲಕ್ಷ ಬಿಡುಗಡೆ ಮಾಡಲಾಗಿದೆ. ಉಳಿದ ₹200 ಲಕ್ಷ ಬಿಡುಗಡೆ ನಿರೀಕ್ಷೆಯಲ್ಲಿದೆ.
ಇದಲ್ಲದೆ ₹35.86 ಲಕ್ಷ ಬೋರ್ಡ್ ಅನುದಾನದಿಂದ ಹಾಗೂ ₹9.30 ಲಕ್ಷ K.S.Q.A.C. ವಿಭಾಗದಿಂದ ವಿನಿಯೋಗಿಸುವಂತೆ ಶಿಫಾರಸು ಮಾಡಲಾಗಿದೆ.
ಮುಖ್ಯಾಂಶಗಳು ಸಂಕ್ಷಿಪ್ತವಾಗಿ:
ಯೋಜನೆಯ ಹೆಸರು: SSLC ಟಾಪರ್ ಲ್ಯಾಪ್ಟಾಪ್ ಯೋಜನೆ
ಪ್ರಯೋಜನ: ಉಚಿತ ಲ್ಯಾಪ್ಟಾಪ್ ವಿತರಣೆಯ ಮೂಲಕ ಡಿಜಿಟಲ್ ಕಲಿಕೆಗೆ ಉತ್ತೇಜನ
ಫಲಾನುಭವಿಗಳು: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಸ್ಎಸ್ಎಲ್ಸಿ ಟಾಪರ್ಗಳು
ಅನುದಾನ: ₹3.25 ಕೋಟಿ (₹80 ಲಕ್ಷ ಈಗಾಗಲೇ ಬಿಡುಗಡೆ)

