SSLC ವಿದ್ಯಾರ್ಥಿಗಳಿಗೆ ರೂ.15,000 ಪ್ರೋತ್ಸಾಹ ಧನ – ಬಿಬಿಎಂಪಿಯಿಂದ ವಿಶೇಷ ವಿದ್ಯಾರ್ಥಿವೇತನ ಯೋಜನೆ
ದಿನಾಂಕ: ಏಪ್ರಿಲ್ 15, 2025
ವಿಭಾಗ: ವಿದ್ಯಾರ್ಥಿವೇತನ / ಸರ್ಕಾರಿ ಯೋಜನೆಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ಕಲ್ಯಾಣ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಆರ್ಥಿಕ ನೆರವು ನೀಡಲು “SSLC ವಿದ್ಯಾರ್ಥಿವೇತನ” ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಪ್ರಥಮ ದರ್ಜೆಯಲ್ಲಿ SSLC ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ.15,000/- ಪ್ರೋತ್ಸಾಹ ಧನ ನೀಡಲಾಗುತ್ತದೆ.
ಯೋಜನೆಯ ಉದ್ದೇಶ:
ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸ ಮುಂದುವರಿಸಿಕೊಳ್ಳುವಲ್ಲಿ ಸಹಾಯ ಮಾಡುವುದು ಹಾಗೂ ವಿದ್ಯಾಭ್ಯಾಸದ ಉತ್ತೇಜನವೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಅರ್ಹತಾ ಮಾನದಂಡಗಳು:
1. ವಿದ್ಯಾರ್ಥಿಯು ಈ ಕೆಳಗಿನ ಮಾನದಂಡಗಳಿಗೆ ಹೊಂದಿಕೆಯಾಗಬೇಕು:
- ಬಿಬಿಎಂಪಿ ವ್ಯಾಪ್ತಿಯ ನಿವಾಸಿಯಾಗಿರಬೇಕು (ಆಧಾರ್ ವಿಳಾಸ ಆಧಾರಿತ).
- ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ / CBSE / ICSE ಯ 10ನೇ ತರಗತಿಯಲ್ಲಿ, ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು.
- ಪ.ಜಾ / ಪ.ಪಂ ವರ್ಗಕ್ಕೆ ಸೇರಿರುವ ಪೌರಕಾರ್ಮಿಕರ ಅವಲಂಬಿತ ವಿದ್ಯಾರ್ಥಿಯಾಗಿರಬೇಕು.
- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿಸಲು ಅಗತ್ಯವಿರುವ ದಾಖಲೆಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿಗೆ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ವಿಳಾಸ ದೃಢೀಕರಣ ಪತ್ರ
- ವಯಸ್ಸು ದೃಢೀಕರಣ ಪ್ರಮಾಣಪತ್ರ
- ರೇಷನ್ ಕಾರ್ಡ್ ಪ್ರತಿಗೆ
- ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು 2025ರ ಮೇ 2ರೊಳಗೆ ತಮ್ಮ ವಸತಿ ಪ್ರದೇಶದ BBMP ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ಕಚೇರಿಗೆ ನೇರವಾಗಿ ಹೋಗಿ ಸ್ವಯಂ ದೃಢೀಕರಿಸಿದ ಅರ್ಜಿಯನ್ನು ಸಲ್ಲಿಸಬೇಕು.
ಮುಖ್ಯ ಸೂಚನೆ:
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿತವಾಗಿದೆ: ಮೇ 2, 2025
- ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
- ವಿಳಂಬವಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

