Union Bank ಯೂನಿಯನ್ ಬ್ಯಾಂಕ್ ನೇಮಕಾತಿ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿ | ಆನ್‌ಲೈನ್ ಅರ್ಜಿ ಆಹ್ವಾನ
Union Bank ಯೂನಿಯನ್ ಬ್ಯಾಂಕ್ ನೇಮಕಾತಿ 2025: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ದೇಶಾದ್ಯಾಂತ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತ ಸರ್ಕಾರದ ಉದ್ಯೋಗಕ್ಕೆ ಆಸಕ್ತರಾದ ಅಭ್ಯರ್ಥಿಗಳು ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಮೇ 2025.
ಹುದ್ದೆಗಳ ವಿವರ:
- ಬ್ಯಾಂಕ್ ಹೆಸರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India)
- ಒಟ್ಟು ಹುದ್ದೆಗಳು: 500
- ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಆಫೀಸರ್ (Specialist Officers)
- ಕೆಲಸದ ಸ್ಥಳ: ಭಾರತದೆಲ್ಲೆಡೆ
- ವೇತನ ಶ್ರೇಣಿ: ₹48,480 ರಿಂದ ₹85,920 ಪ್ರತಿಮಾಸ
ಹುದ್ದಾವಾರಿಯ ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
---|---|
ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) | 250 |
ಸಹಾಯಕ ವ್ಯವಸ್ಥಾಪಕ (ಐಟಿ) | 250 |
ಅರ್ಹತಾ ಮಾನದಂಡ:
ಶೈಕ್ಷಣಿಕ ಅರ್ಹತೆ:
- ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್): ಪದವಿ ಅಥವಾ CA/CMA/CS ಅಥವಾ MBA/MMS/PGDM/PGDBM
- ಸಹಾಯಕ ವ್ಯವಸ್ಥಾಪಕ (ಐಟಿ): B.E/B.Tech ಅಥವಾ MCA, M.Sc, M.S, M.Tech
ವಯೋಮಿತಿ (01 ಏಪ್ರಿಲ್ 2025 ರಂದು ಅನುಸಾರ):
- ಕನಿಷ್ಠ: 22 ವರ್ಷ
- ಗರಿಷ್ಠ: 30 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ:
- OBC (NCL): 3 ವರ್ಷ
- SC/ST: 5 ವರ್ಷ
- ದೈಹಿಕ ಅಂಗವಿಕಲ (PwBD): 10 ವರ್ಷ
ಅರ್ಜಿ ಶುಲ್ಕ:
- SC/ST/PwBD ಅಭ್ಯರ್ಥಿಗಳು: ₹177/-
- ಇತರ ಎಲ್ಲಾ ಅಭ್ಯರ್ಥಿಗಳು: ₹1180/-
- ಪಾವತಿಯ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ:
- ಆನ್‌ಲೈನ್ ಪರೀಕ್ಷೆ
- ಗುಂಪು ಚರ್ಚೆ (Group Discussion)
- ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
- ಆನ್‌ಲೈನ್ ಅರ್ಜಿ ಭರ್ತಿಗೆ ಮೊದಲು ಇಮೇಲ್ ಐಡಿ, ಮೊಬೈಲ್ ನಂಬರ್ ಮತ್ತು ಅಗತ್ಯ ದಾಖಲೆಗಳನ್ನು (ಶೈಕ್ಷಣಿಕ ಪ್ರಮಾಣಪತ್ರ, ಗುರುತಿನ ದಾಖಲೆ, ಫೋಟೋ ಇತ್ಯಾದಿ) ಸಿದ್ಧಪಡಿಸಿಕೊಳ್ಳಿ.
- ಕೆಳಗಿನ ಲಿಂಕ್‌ನಲ್ಲಿ ನೀಡಿರುವ “ಅರ್ಜಿ ಸಲ್ಲಿಸಿ” ಆಯ್ಕೆಯನ್ನು ಕ್ಲಿಕ್ ಮಾಡಿ.
- ಅರ್ಜಿಯಲ್ಲಿ ಅಗತ್ಯವಿರುವ ಮಾಹಿತಿಗಳನ್ನು ನಮೂದಿಸಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ).
- ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅಪ್ಲಿಕೇಶನ್ ನಂಬರ್ ಅನ್ನು ಭದ್ರವಾಗಿ ಇಟ್ಟುಕೊಳ್ಳಿ.
ಮುಖ್ಯ ದಿನಾಂಕಗಳು:
- ಅರ್ಜಿಗಾಗಿ ಆರಂಭ ದಿನಾಂಕ: 30 ಏಪ್ರಿಲ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಮೇ 2025
ದಾಖಲೆ ಮತ್ತು ಲಿಂಕುಗಳು:
- 👉 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- 🌐 ಅಧಿಕೃತ ವೆಬ್ಸೈಟ್: unionbankofindia.co.in