Thursday, January 15, 2026
spot_img
HomeNewsUPI ಬಳಕೆದಾರರಿಗೆ ಗುಡ್ ನ್ಯೂಸ್.!

UPI ಬಳಕೆದಾರರಿಗೆ ಗುಡ್ ನ್ಯೂಸ್.!

 

ಇನ್ನು ಮುಂದೆ UPI ಮೂಲಕ ತಪ್ಪು ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ.!

ಡಿಜಿಟಲ್ ಪಾವತಿಗಳ ಪ್ರಭಾವ ಹೆಚ್ಚಾದ ಈ ಯುಗದಲ್ಲಿ, ಬಹುತೇಕ ಎಲ್ಲರೂ Unified Payments Interface (UPI) ಮೂಲಕ ಹಣ ವರ್ಗಾಯಿಸುತ್ತಿದ್ದಾರೆ. ಈ ತಂತ್ರಜ್ಞಾನದ ಸಹಾಯದಿಂದ ಕೆಲವೇ ಸೆಕೆಂಡುಗಳಲ್ಲಿ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಕಳುಹಿಸಬಹುದು. ಆದರೆ ಕೆಲವೊಮ್ಮೆ ನಂಬಿಕೆಯ ಗೊಂದಲದಿಂದಾಗಿ ಹಣವು ತಪ್ಪಾಗಿ ಬೇರೆಯವರ ಖಾತೆಗೆ ಹೋಗುವ ಸಾಧ್ಯತೆಯೂ ಇತ್ತು.

ಈ ಸಮಸ್ಯೆ ಇನ್ನು ಮುಂದೆ ಎದುರಾಗದಂತೆ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಹತ್ವದ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ಹೊರಡಿಸಿದ ಹೊಸ ನಿಯಮದ ಪ್ರಕಾರ, UPI ಪಾವತಿ ಮಾಡುವ ವೇಳೆ ನೀವು ಹಣ ಕಳುಹಿಸಲು ಬಯಸುವ ವ್ಯಕ್ತಿಯ ಬ್ಯಾಂಕ್‌ನಲ್ಲಿ ನೋಂದಾಯಿತ ಹೆಸರುನ್ನು ನಿಮ್ಮ ಮೊಬೈಲ್‌ ಸ್ಕ್ರೀನ್ ನಲ್ಲಿ ಸ್ಪಷ್ಟವಾಗಿ ನೋಡಬಹುದಾಗಿರುತ್ತದೆ.

WhatsApp Group Join Now
Telegram Group Join Now

ಹೊಸ ನಿಯಮದ ಮುಖ್ಯ ಅಂಶಗಳು:

  • ಯುಪಿಐ ಪಾವತಿಯ ಸಮಯದಲ್ಲಿ, ಹಣ ಪಡೆಯುವ ವ್ಯಕ್ತಿಯ ನಿಜವಾದ ಬ್ಯಾಂಕ್ ಖಾತೆದಾರರ ಹೆಸರು ಕಾಣಿಸುತ್ತದೆ.
  • ನೀವು ಆ ವ್ಯಕ್ತಿಯನ್ನು ನಿಮ್ಮ ಫೋನ್‌ನಲ್ಲಿ ಬೇರೆ ಹೆಸರಿನಿಂದ ಸೆೇವ್ ಮಾಡಿಕೊಂಡಿದ್ದರೂ ಸಹ, UPI ಪಾವತಿ ಸಮಯದಲ್ಲಿ ಮಾತ್ರ ನಿಜವಾದ ಹೆಸರು ತೋರಿಸಲಾಗುತ್ತದೆ.
  • ಇದು ಜೂನ್ 30, 2025 ರಿಂದ ಎಲ್ಲಾ ಯುಪಿಐ ಆ್ಯಪ್‌ಗಳಲ್ಲಿ ಅನ್ವಯವಾಗಲಿದೆ.

ಹಣ ತಪ್ಪು ಖಾತೆಗೆ ಹೋದರೆ ಏನು ಮಾಡಬೇಕು.?

ತಪ್ಪಾಗಿ ಬೇರೆಯವರ ಖಾತೆಗೆ ಹಣ ಹೋದರೆ, ಮೊದಲಿಗೆ ಆ ವ್ಯಕ್ತಿಯನ್ನು ಸಂಪರ್ಕಿಸಿ ಹಣ ಹಿಂದಿರುಗಿಸಲು ಕೇಳಬೇಕು. ಆದರೆ ಅವರು ಸಹಕರಿಸದಿದ್ದರೆ, ಈ ಕ್ರಮವನ್ನು ಅನುಸರಿಸಬಹುದು:

  1. ನಿಮ್ಮ ಬ್ಯಾಂಕ್‌ಗೆ ದೂರು ನೀಡಿ – ಅವರು ತನಿಖೆ ನಡೆಸುತ್ತಾರೆ.
  2. NPCI ಯ ಟೋಲ್ ಫ್ರೀ ಸಂಖ್ಯೆ 1800-120-1740 ಗೆ ಕರೆ ಮಾಡಿ ದೂರು ದಾಖಲಿಸಬಹುದು.
  3. NPCI ವೆಬ್‌ಸೈಟ್‌ನಲ್ಲಿ ಆನ್‌ಲೈನ್ ದೂರು ಸಲ್ಲಿಸಬಹುದು.

ಉದ್ದೇಶ:

ಈ ನಿಯಮದ ಉದ್ದೇಶ, ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಹಣದ ವಹಿವಾಟಿನಲ್ಲಿ ನಿಖರತೆ ಒದಗಿಸುವುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments